ಮೇರಿ (ಏರಮ್, ಇವ್ರಿತ್: מרים, ಮರಿಯಮ್ ಮಿರೀಯಮ್ ಅರಬ್ಬೀ:مريم, ಮರ್ಯಮ್), ಇದರ ಅರ್ಥ ಪ್ರಾಯಶಃ 'ಕ್ರಾಂತಿ ಕಾರಿಣಿ' ಅಥವಾ 'ಧೈರ್ಯವಂತಳು' ಆಗಿರಬಹುದೆಂಬ ಊಹೆಯಿದೆ. ಈಕೆಯ ತಂದೆ ಜೋಕಿಂ ಮತ್ತು ತಾಯಿ ಆನಾ.

ವರ್ಜಿನ್ ಮೇರಿ/ಕನ್ಯಾಮೇರಿ
The Virgin in Prayer, by Sassoferrato, c. 1650
West: Mother of God, Queen of Heaven, Mother of the Church
East: Theotokos
Islam: Sayyidatna ("Our Lady"), Greatest Woman, The Chosen One, The Purified One
Born ನಜರತ್
Honored in Christianity, Islam
Canonized Pre-Congregation
Major shrine Santa Maria Maggiore (See Marian shrines)
Feast See Marian feast days
Attributes Blue mantle, crown of 12 stars, pregnant woman, roses, woman with child
Patronage See Patronage of the Blessed Virgin Mary

ಇತಿಹಾಸ ಬದಲಾಯಿಸಿ

ಗಂಡಿನ ಸಂಪರ್ಕವಿಲ್ಲದೇ ಈಕೆ ಯೇಸುಕ್ರಿಸ್ತರಿಗೆ ತಾಯಿಯಾದ ಕಾರಣಕ್ಕೆ ಈಕೆ ಕನ್ಯಾಮೇರಿ' (ವರ್ಜಿನ್ ಮೇರಿ)ಎಂದು ಕರೆಯಲ್ಪಟ್ಟಳು ಹಾಗೂ ದೇವ ಕುಮಾರ ಯೇಸುವಿನ ತಾಯಿಯಾಗಲು ಒಪ್ಪಿದಳಾದ್ದರಿಂದ ಆಕೆಸಂತ ಮೇರಿ ಎಂದು ಕರೆಯಲ್ಪಟ್ಟಳು. ಹೊಸ ಒಡಂಬಡಿಕೆಯಲ್ಲಿ ನಜರತ್‌ನ ಏಸುವಿನ ತಾಯಿಯೆಂದು ಗುರುತಿಸಲಾದ ಗಲಿಲೀಯ ಪ್ರಾಂತ್ಯದಲ್ಲಿನ ನಜರತ್‍ ಎಂಬ ಸುಂದರವಾದ ಊರಿನ ಒಬ್ಬ ಯಹೂದಿ ಮಹಿಳೆಯಾಗಿದ್ದಳು. ಮುಸ್ಲಿಮ ರು ಕೂಡ ಅವಳನ್ನು "ವರ್ಜಿನ್ ಮೇರಿ" ಅಥವಾ ನಮ್ಮ ಕನ್ಯಾಮೇರಿ ಎಂಬ ಅರ್ಥನೀಡುವ ಸಯ್ಯೀದಾ ಮರಿಯಮ್ ಎಂದು ಹೇಳುತ್ತಾರೆ. ಇಸ್ಲಾಮ್ ಧರ್ಮದಲ್ಲಿ ಅವಳು ಪ್ರವಾದಿ ಏಸು (ಅರಬ್ಬೀ ಭಾಷೆಯಲ್ಲಿ ಯೇಸುವನ್ನು 'ಈಸಾ' عيسى )ವಿನ ತಾಯಿ.

"https://kn.wikipedia.org/w/index.php?title=ಸಂತ_ಮೇರಿ&oldid=670696" ಇಂದ ಪಡೆಯಲ್ಪಟ್ಟಿದೆ